ನಮ್ಮ ಬಗ್ಗೆ
ಆತ್ಮೀಯ ಬಂಧುಗಳೇ.................
ಕಳೆದ ಒಂದಷ್ಟು ವರ್ಷಗಳಿಂದ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಸರ್ಕಾರಿ ಶಾಲೆಗಳಿಗೆ ಮತ್ತು ಸರ್ಕಾರಿ ಶಾಲೆ ಮಕ್ಕಳಿಗೆ ಬೇಕಾಗಿರುವಂತಹ ಸಾಮಗ್ರಿಗಳನ್ನು ದಾನಿಗಳ ಸಹಾಯದಿಂದ ವಿತ್ತರಿಸುವ ಕೈಂಕರ್ಯ ಕೈಗೊಂಡಿದ್ದು ಈಗಾಗಲೇ ಕೋಲಾರ ಜಿಲ್ಲೆಯ ಬಹುತೇಕ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಬ್ಯಾಗ್ ವಿತರಣೆ, ಎಕ್ಸಾಮ್ ಬರೆಯುವ ಪ್ಯಾಡ್ ಲೇಖನಿ, ಶೂ, ನಲಿಕಲಿ ತರಗತಿಗಳಿಗೆ ಕುಳಿತುಕೊಳ್ಳುವ ಚೇರ್ ಟೇಬಲ್ ವ್ಯವಸ್ಥೆ, ಶುದ್ಧ ನೀರಿನ ಕುಡಿಯುವ ವಾಟರ್ ಫಿಲ್ಟರ್, ಶಾಲಾ ಮಕ್ಕಳಿಗೆ ಸ್ವೆಟರ್, ಟೈ ಬೆಲ್ಟ್, ವಿಕಲಚೇತನ ಮಕ್ಕಳಿಗೆ ತ್ರಿ ಸೈಕಲ್, ಕೃತಕ ಕಾಲಿನ ಜೋಡಣೆ ಬರಗಾಲ ಮತ್ತು ಕೋವಿಡ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ಈಗೆ ಅನೇಕ ಕಾರ್ಯಕ್ರಮಗಳನ್ನು ದಾನಿಗಳು ಸ್ನೇಹಿತರು ಸಹಕಾರದಿಂದ ನಡೆಯುತ್ತಿದೆ ಇದು ನಿಜಕ್ಕೂ ನಮಗೆ ತುಂಬಾ ಖುಷಿ ನೀಡುವಂತಹ ವಿಚಾರ ಸರ್ಕಾರಿ ಶಾಲೆಗಳ ಮತ್ತು ಮಕ್ಕಳ ಸಬಲಿಕರಣಕ್ಕಾಗಿ ತಾವು ನಮ್ಮೊಂದಿಗೆ ಕೈಜೋಡಿಸಿ ನಮ್ಮ ಸರ್ಕಾರಿ ಶಾಲಾ ಮಕ್ಕಳಿಗೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ತಮ್ಮ ಕಡೆಯಿಂದಲೂ ದೊರಕುವಂತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ಅಭಿಲಾಷೆಯ ಮನವಿ
No comments:
Post a Comment